ಅಹ್ರಿಮನ್

ಜರತುಷ್ಟ್ರ ಅಥವಾ ಅಹುಮಜ್ದನ ಮತದಲ್ಲಿ ಅಹುರಮಜ್ದ ಮತ್ತು ಅಹ್ರಿಮನ್ ಎಂಬ ಎರಡು ತತ್ತ್ವಗಳಿವೆ. ಮಜû್ದó ಒಳ್ಳೆಯಕ್ಕೆಲ್ಲ ಕಾರಣ. ಅಹ್ರಿಮನ್ ಕೆಟ್ಟದ್ದಕ್ಕೆಲ್ಲ ಕಾರಣ. ಇವನಿಗೆ ಅಂಗ್ರಮೈನ್ಯು ಎಂಬ ಇನ್ನೊಂದು ಹೆಸರಿದೆ. ಮಜû್ದóನೂ ಮೈನ್ಯುವೂ ಪ್ರಪಂಚದ ಆದಿಯಿಂದ ಪರಸ್ಪರ ವಿರುದ್ಧ ಪರಿಣಾಮಗಳಿಗೆ ಕಾರಣರು. ಅಹುರಮಜû್ದó ಬೆಳಕಿನ ರೂಪ. ಅಹ್ರಿಮನ್ ಪ್ರಪಂಚದ ಉತ್ತರ ದಿಕ್ಕಿನಲ್ಲಿರುವ ಕೊನೆ ಇಲ್ಲದ ಕಗ್ಗತ್ತಲೆಯ ಪಾತಾಳದಿಂದ ಬಂದವ. ಈತನ ರೂಪ ತಪಸ್ಸು. ಈತ ಈ ಲೋಕಕ್ಕೆ ಬಂದ ತರುಣದಲ್ಲಿ ಮೊದಲೇ ಇದ್ದ ಮಜ್ದನನ್ನ  ಸಂಧಿಸಿರಲಿಲ್ಲ. ಮಜ್ದ ತನಗಿಂತ ಪ್ರಬಲನೆಂದಾಗಲಿ, ಅವನಿಂದ ತಾನು ಪರಾಜಯ ಹೊಂದುವೆನೆಂದಾಗಲಿ ಮೈನ್ಯುವಿಗೆ ತಿಳಿಯದು. ಮಜ್ನದನ್ನು ಪ್ರತಿಭಟಿಸಬೇಕು, ಅವನ ಅನುಚರರನ್ನು, ಅವರು ಮಾಡಿದ ಎಲ್ಲ ಒಳ್ಳೆಯ ಕೆಲಸಗಳನ್ನೂ ಹಾಳುಮಾಡಬೇಕು ಎಂಬುದೊಂದೇ ಮೈನ್ಯುವಿನ ಸಂಕಲ್ಪ. ತನ್ನ ಹಾಳು ಕೆಲಸಕ್ಕೆ ನೆರವಾಗುವಂತೆ ಅವನು ಪಿಶಾಚಿಗಣವನ್ನು ಸೃಷ್ಟಿಸಿಕೊಂಡ. ಮಜ್ದನ ಅನುಯಾಯಿಗಳಾದ ಮಾನವರಿಂದ ಅಹ್ರಿಮನ್‍ನ ಪರಾಜಯ ಖಂಡಿತ; ಲೋಕೋದ್ಧಾರಣದ ಕಾಲದಲ್ಲಿ ಇವನೂ ಇವನ ಗಣಗಳನ್ನು ಮಜû್ದóನುಗೆ ಶರಣಾಗುತ್ತಾರೆ ಎಂಬುದು ಈ ಮತದ ನಿಶ್ಚಲವಾದ ನಂಬಿಕೆ.
(ನೋಡಿ- ಜರತುಷ್ಟ್ರ-ಮತ)									
(ಜಿ.ಹೆಚ್.; ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ